ವಿಭಾಗಾಧ್ಯಕ್ಷರು

ಎಸ್.ಜಿ. ಕಬ್ಬಿನಗದ್ದೆಯವರು ಪೂರ್ಣಾವಧಿಯಾಗಿ ನಮ್ಮೊಂದಿಗೆ ಇರಲಿದ್ದಾರೆ ಮತ್ತು ಸಮಕಾಲೀನ ಶಿಕ್ಷಣದ ಉಸ್ತುವಾರಿಯ ಜೊತೆಗೆ ಇತಿಹಾಸ ವಿಭಾಗದ ನೇತೃತ್ವವನ್ನೂ ವಹಿಸಲಿದ್ದಾರೆ.

ಅನುಭವ-ಸಾಮರ್ಥ್ಯಗಳ ಆಗರವೇ ಆದ ಎಸ್.ಎಸ್.ಹೆಗಡೆಯವರು ಇಂಗ್ಲಿಷ್ ವಿಭಾಗವನ್ನು ಕಟ್ಟುವ ಹೊಣೆಯನ್ನು ಸಂತೋಷವಾಗಿ ಸ್ವೀಕರಿಸಿದ್ದಾರೆ.

ನಮ್ಮ ಮುಂದಿನ ಪೀಳಿಗೆಗೆ ವಿದ್ಯೆಯ ಜೊತೆ ದೇಶನಿಷ್ಠೆಯನ್ನು ನೀಡಬೇಕೆಂಬ ವಿವಿವಿ’ಯ ಕನಸಿಗೆ ಅ.ಪು.ನಾರಾಯಣಪ್ಪನವರ ಆಗಮನದಿಂದ ನೂರಾನೆ ಬಲ ಬಂತು!

ಫಿಸಿಕ್ಸ್ ವಿಭಾಗದ ನೇತೃತ್ವವನ್ನು ಪಠ್ಯಪುಸ್ತಕಗಳ ನಿರ್ಮಿತಿಯ ಖ್ಯಾತಿಯ ಮರುವಳ ನಾರಾಯಣ ಭಟ್ಟರು ವಹಿಸಲಿದ್ದಾರೆ.

ಅರಿವು-ಅನುಭವಗಳ ಖನಿ, ಸಾಧಕಾಗ್ರಣಿ ಡಿ.ಎನ್.ಭಟ್ಟರು ನಮ್ಮ ಗುರುಕುಲದಲ್ಲಿ ಸ್ವತಃ ಬೋಧನೆ ಮಾಡಲಿದ್ದಾರೆ!

ಸದ್ಗುಣಗಳ ಖನಿ, Accountancy ಮತ್ತು Economyಗಳಲ್ಲಿ ಅದ್ವಿತೀಯ ಪರಿಣತ ಎಮ್.ಆರ್.ಹೆಗಡೆಯವರ ನಿಸ್ವಾರ್ಥ ನೇತೃತ್ವವು ಗುರುಕುಲ ಮತ್ತು ವಿದ್ಯಾರ್ಥಿಗಳ ಮಹಾಲಾಭ.

ನಮ್ಮ ಗುರುಕುಲಗಳ ಸಂವಿಧಾನ ವಿಭಾಗದ ಮಾರ್ಗದರ್ಶಕರಾಗಿ ವಿಶ್ವಮಾನ್ಯ ಕಾನೂನು-ತಜ್ಞ ಡಾ| ಪಿ.ಈಶ್ವರ ಭಟ್ಟರು..

ಪಾದೇಕಲ್ಲು ವಿಷ್ಣು ಭಟ್ಟರು ಬರೆದ, ಸಂಪಾದಿಸಿದ ಕನ್ನಡದ ಮೌಲ್ಯವತ್ತಾದ ಗ್ರಂಥಗಳು ಅನೇಕಾನೇಕ; ನಡೆಸಿದ ಪಾಠ-ಪ್ರವಚನಗಳು ಅಸಂಖ್ಯ. ಕನ್ನಡದ ಕುರಿತಾದ ಅಧಿಕಾರ-ವಾಣಿಯುಳ್ಳ ಅಪರೂಪದ ವಿದ್ವಾಂಸರು ಅವರು. ಇದೀಗ ನಮ್ಮ ಗುರುಕುಲಗಳ ಕನ್ನಡ ವಿಭಾಗದ ನೇತೃತ್ವದಲ್ಲಿ….

ಆಡು ಮುಟ್ಟದ ಸೊಪ್ಪಿಲ್ಲ; ಸಂಸ್ಕೃತದಲ್ಲಿ ಸತ್ಯನಾರಾಯಣ ಶರ್ಮರು ನೋಡದ ಗ್ರಂಥವಿಲ್ಲ! ನಮ್ಮ ಗುರುಕುಲಗಳಲ್ಲಿ ಶರ್ಮರು ಸಂಸ್ಕೃತ ವಿಭಾಗದ ನೇತೃತ್ವ ವಹಿಸುವರೆಂಬುದು ಹೆಮ್ಮೆಯಲ್ಲವೇ?

ನಮ್ಮ ಗುರುಕುಲಗಳ ಭಾರತೀಯ ಗಣಿತ ವಿಭಾಗದ ನೇತೃತ್ವವು ಪ್ರಮೋದ್ ವಿ ಪಂಡಿತರ ಹೆಗಲಿನಲ್ಲಿ.. ಪಾಂಡಿತ್ಯ~ಕೌಶಲ್ಯ~ಅನುಭವಗಳ ಖನಿಯಾದ ಪ್ರಮೋದ್‌ರವರ ನೇತೃತ್ವದಲ್ಲಿ ಗಣಿತವು ವಿದ್ಯಾರ್ಥಿಗಳಿಗೆ ಆಟದಷ್ಟೇ ಆಸಕ್ತಿಕರ ವಿಷಯವಾಗುವುದರಲ್ಲಿ ಸಂಶಯವಿಲ್ಲ!

ವಿವಿವಿ’ಯ ಕೃಷ್ಣಯಜುರ್ವೀದ ವಿಭಾಗದ ನೀತೃತ್ವ ಭದ್ರ ಹಸ್ತಗಳಲ್ಲಿ! ತಿರುಪತಿಯ ವೆಂಕಟೇಶನಿಗೆ ಮೂವತ್ತು ವರ್ಷಗಳ ಕಾಲ ವೀದಶ್ರವಣ ಮಾಡಿಸಿದ, ಯಜುರ್ವೀದದ ಪರಿಣತಿಗಾಗಿ ಶ್ರೀಮಠದಿಂದ ‘ಶ್ರುತಿಸಾಗರ’ ಎಂಬ ಬಿರುದನ್ನೂ, ಮುದ್ರೆಯುಂಗುರವನ್ನೂ ಪಡೆದ ಪಳ್ಳತ್ತಡ್ಕ ಶಂಕರನಾರಯಣ ಭಟ್ಟರು ಈ ಹೊಣೆಗಾರಿಕೆಯನ್ನು ವಹಿಸಿಕೊಂಡಿದ್ದಾರೆ.

ಪ್ರಸಿದ್ಧ ಕರಿಕಾನ ಪರಮೀಶ್ವರಿ ಅಮ್ಮನವರ ಭಟ್ಟರು ಸಾಮವೀದ ವಿಭಾಗದ ಅಧ್ಯಕ್ಶರು.

ಅಥರ್ವವೇದ ವನ್ನು ಸಮಗ್ರವಾಗಿ ಅಧ್ಯಯನ ಮಾಡಿದವರು ವಿಶ್ವದಲ್ಲಿಯೇ ವಿರಳ; ಆಚಾರ್ಯ ಶ್ರೀಧರ ಅಡಿಗಳು ಕಾಶಿಯಲ್ಲಿ ಇದನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ ಅಪರೂಪದ ವಿದ್ವಾಂಸರು. ಋಗ್ವೇದವನ್ನು ಬಲ್ಲವರು. ನಿಂತಲ್ಲಿಯೇ ಸಂಸ್ಕೃತದಲ್ಲಿ ಶ್ಲೋಕಗಳನ್ನು ರಚಿಸಬಲ್ಲ ಆಶುಕವಿ! ಗುರುಕುಲಗಳ ಅಥರ್ವವೇದದ ವಿಭಾಗಾಧ್ಯಕ್ಷತೆಯನ್ನು ಇವರು ವಹಿಸಲಿದ್ದಾರೆ.

ಪದ್ಮಶ್ರೀ, ಮಹಾಮಹೋಪಧ್ಯಾಯ, ನೃತ್ತಗೀತವಿಶಾರದ ರಾ. ಸತ್ಯನಾರಾಯಣರ ಪುತ್ರೀರತ್ನ, ಕಾಂಚನದ ಸುಪ್ರಸಿದ್ಧ ಸಂಗೀತ ಮನೆತನದ ಸೊಸೆ, ಕರ್ನಾಟಕ-ಕಲಾಶ್ರೀ ಕಾಂಚನ ಸುಬ್ಬರತ್ನಂ’ರ ಸಹಧರ್ಮಿಣಿ, ಮೂವರು ಶ್ರೇಷ್ಠ ಸಂಗೀತಜ್ಞೆಯರ ಮಾತೆ ಶ್ರೀಮತಿ ರೋಹಿಣಿ ಕಾಂಚನ ಸುಬ್ಬರತ್ನಂ ಗುರುಕುಲಗಳ ಕರ್ನಾಟಕ-ಸಂಗೀತ ವಿಭಾಗದ ನೇತೃತ್ವ ವಹಿಸಿದ್ದಾರೆ.

ವರ್ತಮಾನ ಕಾಲದಲ್ಲಿ ಹಿಂದುಸ್ತಾನೀ ಸಂಗೀತದ ಮೇರುಪುರುಷರಲ್ಲಿ ಓರ್ವರಾದ ಪಂಡಿತ ಪರಮೇಶ್ವರ ಹೆಗಡೆಯವರು ನಮ್ಮ ಗುರುಕುಲಗಳ ಹಿಂದುಸ್ತಾನೀ ಸಂಗೀತ ವಿಭಾಗದ ನೇತೃತ್ವ ವಹಿಸಲಿದ್ದಾರೆ.

ಗುರುಕುಲಗಳ ವಾದನ ವಿಭಾಗದ ನೇತೃತ್ವವನ್ನು ವಹಿಸುತ್ತಿರುವವರು ಕರ್ನಾತಕ ಸಂಗೀತ-ನೃತ್ಯ ಅಕಾಡಮಿಯ ಅಧ್ಯಕ್ಷರಾದ, ಶಿವು ಖ್ಯಾತಿಯ, ಸುಪ್ರಸಿದ್ಧರಾದ ವಿದ್ವಾನ್ ಅನೂರು ಅನಂತಕೃಷ್ಣ ಶರ್ಮ.

ಬಹುಮುಖ ಪ್ರತಿಭೆ ಶಮನ್ ಹೆಗಡೆಯ ಹೆಗಲ ಮೇಲೆ ನಮ್ಮ ಗುರುಕುಲಗಳ ಭಾರತೀಯ ಪಾಕಶಾಸ್ತ್ರ ಶಿಕ್ಷಣದ ನೇತೃತ್ವ. ಅಂದ ಆಗೆ ಇವರು ಪಾಕಶಾಸ್ತ್ರವನ್ನೂ ಬಲ್ಲರು, ಪಾಕವಿಜ್ಞಾನವನ್ನೂ ಬಲ್ಲರು!

ಗುರುಕುಲಗಳ ಕರಕುಶಲ/ರಂಗವಲ್ಲಿ ವಿಭಾಗದ ನೇತೃತ್ವವನ್ನು ಪ್ರತಿಭೆ – ಅನುಭವಗಳ ಖನಿಯಾದ ಶ್ರೀಮತಿ ಮಹಾಲಕ್ಷ್ಮಿ ತಿಮ್ಮಪ್ಪ ಇವರು ವಹಿಸಲಿದ್ದಾರೆ.

ಗುರುಕುಲಗಳ ಮಕ್ಕಳಿಗೆ ಯಕ್ಷಗಾನ ಕಲಿಕೆಗೂ ಅವಕಾಶ ಇದೆ! ಈ ವಿಭಾಗದ ಅಧ್ಯಕ್ಷರು ಸುಬ್ರಾಯ ಭಾಗವತ್ ಕಪ್ಪೆಕೆರೆ.

ಒಳ್ಳೆಯ ಸಾಧಕರು ಹಾಗು ಒಳ್ಳೆಯ ಬೋಧಕರು ಆಗಿರುವ ಡಾ. ಶಂಕರ ಭಟ್ ರಾಜ್ಯಶಾಸ್ತ್ರ ವಿಭಾಗದ ನೇತೃತ್ವವನ್ನು ವಹಿಸಲಿದ್ದರೆ.

ಪತ್ರಿಕಾರಂಗದಲ್ಲಿ ೧೮ ವರ್ಷಗಳ ಅನುಭವವಿರುವ, ಪ್ರಸ್ತುತ ‘ಹೊಸದಿಗಂತ’ದ ಪ್ರಧಾನ ಸಂಪಾದಕರೂ ಆಗಿರುವ ವಿನಾಯಕ ಭಟ್ ಮೂರೂರು – ನಮ್ಮ ಗುರುಕುಲಗಳ ಸಮೂಹ ಸಂವಹನ ವಿಭಾಗದ ನೇತೃತ್ವದಲ್ಲಿ!

ನೀರ್ನಳ್ಳಿ ಗಣಪತಿಯವರ ಬೆರಳುಗಳಲ್ಲಿಯೇ ಹೃದಯ-ಮಿದುಳುಗಳಿವೆ! ಅಂಥವರ ನೆರಳಲ್ಲಿ ಅರಳುವ ಮಕ್ಕಳ್ಳದ್ದು ಮಹಾಪುಣ್ಯವೇ ಅಲ್ಲವೇ?

೪೭ ವರ್ಷಗಳ ಬೋಧನೆ ~ ೩೫ ವರ್ಷಗಳ ಸಂಶೋಧನೆಯ ಅನುಭವಗಳ ಮೇಧಾವಿ – ಅನುಭವಿ ಆರ್ಥಿಕ ತಜ್ಞರೆಂದೇ ಖ್ಯಾತರಾದ ಡಾ. ಗೋಪಾಲಕೃಷ್ಣ ವೆಂಕಟರಮಣ ಜೋಶಿಯವರು ಇದೀಗ ವಿವಿವಿ ಗುರುಕುಲಗಳ ಅರ್ಥಶಾಸ್ತ್ರ ವಿಭಾಗದ ನೇತೃತ್ವವನ್ನು ವಹಿಸಿರುವರು..

ವಿವಿವಿ ಗುರುಕುಲಗಳ ಹಿಂದಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿರುವ ಡಾ. ಶ್ರೀಧರ ರಮಾಕಾಂತ ಹೆಗಡೆಯವರ ಸಾಧನೆಗಳಿವು..